ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ದೇವಾಲಯದಲ್ಲಿ ಜರುಗುವ ಉತ್ಸವ / ಜಾತ್ರೆಗಳ ವಿವರ

ಶ್ರೀ ನಿಮಿಷಾಂಬಾ ವರ್ಧಂತಿ ಮಹೋತ್ಸವ

ಪ್ರತಿ ವರ್ಷ ವೈಶಾಖ ಶುದ್ದ ದಶಮಿ ದಿವಸ ಶ್ರೀ ನಿಮಿಷಾಂಬಾ ಅಮ್ಮನವರ ವರ್ಧಂತಿ ಮಹೋತ್ಸವ ಜರುಗುತ್ತದೆ. ಈ ದಿನದಲ್ಲಿ ಶ್ರೀ ಅಮ್ಮನವರಿಗೆ ಗಣಪತಿ ಹೋಮ, ಶ್ರೀ ನಿಮಿಷಾಂಬಾ ಹೋಮ, ಲಕ್ಷ್ಮಿ ನಾರಾಯಣ ಹೋಮ, ಮೃತ್ಯುಂಜಯ ಹೋಮ ಮಾಡಲಾಗುತ್ತದೆ. ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಶ್ರೀ ನಿಮಿಷಾಂಬಾ ಅಮ್ಮನವರರಿಗೆ 108 ಕಳಸ ಪೂಜಾ ವಿಧಿ ಕಾರ್ಯ ನಂತರ ಅಭಿಷೇಕ ನಡೆಸಲಾಗುತ್ತದೆ. ಹಾಗೇ ಶ್ರೀ ಮುಕ್ತಿಕೇಶ್ವರ, ಶ್ರೀ ನಾರಾಯಣ ಸ್ವಾಮಿಗೆ ಅಭಿಷೇಕ ಮಾಡಲಾಗುತ್ತದೆ.ನಂತರ ನಿವೇದನೆ ಹಾಗೂ ಮಾಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಗುವುದು. ಈ ಸಂಭಂಧ ಸಂಜೆ ಶ್ರೀ ನಿಮಿಷಾಂಬಾ ದೇವಿ ಶ್ರೀ ಮುಕ್ತಿಕೇಶ್ವರ ಸ್ವಾಮಿ ಹಾಗೂ ಶ್ರೀ ನಾರಾಯಣ ಸ್ವಾಮಿಯವರ ಪ್ರಾಕಾರೋತ್ಸವ ಸೇವೆ ಜರುಗುತ್ತದೆ .

ದುರ್ಗಾ ಹೋಮ

 ಶ್ರೀಅಮ್ಮನವರ ದೇವಾಲಯದಲ್ಲಿ ಶ್ರೀದುರ್ಗಾದೇವಿ ಹೋಮ ಸಂದರ್ಭಕ್ಕೆ 1008 ದುರ್ಗಾ ಮೂಲ ಮಂತ್ರ ಪಠಿಸಲಾಗುತ್ತದೆ. ಹಾಗೂ 108 ದುರ್ಗಾ ಸೂಕ್ತಮಂತ್ರ ಪಾರಾಯಣ ಮಾಡಲಾಗುತ್ತದೆ. ಆಚಮನ ದೇವತಾ ಪ್ರಾರ್ಥನೆ, ಮಹಾಸಂಕಲ್ಪ, ಗಣಪತಿ ಪೂಜೆ, ಪುಣ್ಯ, ಕಳಸ ಪೂಜೆ, ದುರ್ಗಾ ಹೋಮ, ಪಾಯಸದಿಂದ ಆಹುತಿಗಳು , ನಂತರ ಪೂರ್ಣ ಆಹುತಿ , ಪ್ರಸಾದ ವಿನಿಯೋಗ ಮಾಡಲಾಗುವುದು.

ನವರಾತ್ರಿ

ಶ್ರೀ ನಿಮಿಷಾಂಬಾ ದೇವಾಲಯದಲ್ಲಿ ಪ್ರತಿ ವರ್ಷ ನವರಾತ್ರಿ ಉತ್ಸವ ಸಂದರ್ಭಕ್ಕೆ ಬೆಳಿಗ್ಗೆ ಹಾಗೂ ಸಂಜೆ ಸಪ್ತಶತಿ ಪಾರಾಯಣ ಪೂರ್ವಕ ಪೂಜೆ ನಡೆಯುತ್ತದೆ. ಈ ಸಂಧರ್ಭದಲ್ಲಿ ಮಾರ್ಕಾಂಡೇಯ ಪುರಾಣದ ದೇವಿ ಮಹಾತ್ಮೆಯ 700 ದೇವಿಶ್ಲೋಕ ಹೇಳಲಾಗುತ್ತದೆ. ಶ್ರೀ ದೇವಿಗೆ ಪಾಯಸ ನಿವೇದನೆ ಅರ್ಪಿಸಲಾಗುತ್ತದೆ. ದುರ್ಗಾಷ್ಟಮಿ ದಿವಸ, ಚಂಡಿಕಾ ಹೋಮ ಜರುಗುತ್ತದೆ ಮತ್ತು ಪೂರ್ಣಆಹುತಿ ಮಹಾ ನಿವೇದನೆ ಪ್ರಸಾದ ವಿನಿಯೋಗ ಮಾಡಲಾಗುವುದು. ಚಂಡೀ ಹೋಮ ಸಂಧರ್ಭಕ್ಕೆ ಚಂಡೀ ಪಾರಾಯಣ ಪಾಯಸದಿಂದ ಆಹುತಿ, ಆಯುಧ ಪೂಜಾ, ಸರಸ್ವತೀ ಪೂಜೆ ಹಾಗೂ ವಿಜಯದಶಮಿ ದಿವಸ ವಿಶೇಷ ಪೂಜಾಕಾರ್ಯಗಳು ಧಾರ್ಮಿಕ ವಿಧಿವಿಧಾನಗಳ ರೀತ್ಯಾ ಜರಗುತ್ತವೆ.

ಶ್ರೀ ನಿಮಿಷಾಂಬಾ ದೇವಸ್ಥಾನದಲ್ಲಿ ಹಿಂದು ಧಾರ್ಮಿಕ ವಿಧಿವಿಧಾನದಂತೆ ಯುಗಾದಿ, ಗಣೇಶ ಚತುರ್ಥಿ, ದೀಪಾವಳಿ ವಿಶೇಷ ದಿನಗಳಲ್ಲಿ ವಿಶೇಷ ಅಭಿಷೇಕ ಪಾರಾಯಣ ನಿವೇದನೆ ನಂತರ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ.

*ಪ್ರತಿ ಪೂರ್ಣಿಮೆಯಂದು ಭಕ್ತಾದಿಗಳಿಗೆ ಉಚಿತ ಅನ್ನ ದಾಸೋಹ ಸೇವೆ ನಡೆಸಲಾಗುತ್ತದೆ.

ಸೂಚನೆ :

ದೇವಸ್ಥಾನದವತಿಯಿಂದ ದೇಣಿಗೆ ಪಡೆಯಲು ಯಾರನ್ನೂ ನೇಮಕ ಮಾಡಿರಲಾಗಿರುವುದಿಲ್ಲ.

ದೇವಸ್ಥಾನಕ್ಕೆ ದೇಣಿಗೆ ಹಾಗೂ ಒಡವೆ ಕೊಡುವವರು, ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಅಧಿಕೃತ ರಸೀತಿ ಪಡೆಯಬಹುದಾಗಿದೆ.

ದೇಗುಲದ ಅಭಿವೃದ್ದಿ ಕಾರ್ಯಕ್ಕೆ ದಾನಿಗಳಿಂದ ದೇಣಿಗೆ ರೂಪದಲ್ಲಿ ಹಣವನ್ನು ಸ್ವೀಕರಿಸಲಾಗುವುದು.

ಛಾಯಾಚಿತ್ರ